ರಾಜ್ಯ
ಕಾರಹುಣ್ಣಿಮೆ: ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ಗಲಾಟೆ, ರೈತನ ಕೈ ಕಟ್
Haveri News: ಮೊನ್ನೇ ಅಷ್ಟೇ ಮೋಹರಂ ಹಬ್ಬ ಮುಗಿದಿದ್ದು, ಹಲವೆಡೆ ಹಿಂದೂ ಮುಸ್ಲಿಮರು ಸೇರಿಕೊಂಡು ಹಬ್ಬವನ್ನು ಯಶಸ್ವಿ ಮಾಡಿದ್ದಾರೆ. ಯಾವುದೇ ದೊಡ್ಡ ಅಹಿತಕರ ಘಟನೆಗಳಾಗಿರುವ ವರದಿಯಾಗಿಲ್ಲ. ಆದ್ರೆ, ನಿನ್ನೆ(ಜೂನ್ 29) ರೈತರ ಹಬ್ಬವೆಂದು ಕರೆಯಲ್ಪಡುವ ಕಾರಹುಣ್ಣಿಮೆ ಆಚರಣೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಾರೆ ಎನ್ನುವ ಕಾರಣಕ್ಕೆ ಗಲಾಟೆ ಮಾಡಿದ್ದು, ಮಾತಿನ ಚಕಮಕಿ ಮಾರಾಮಾರಿಗೆ ತಿರುಗಿದೆ.
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರ ಪೈಪೋಟಿ ನಡುವೆ ತನಗೆ ಮಂತ್ರಿಗಿರಿಯೇ ಬೇಡವೆಂದ ಕೆ.ಎನ್. ರಾಜಣ್ಣ!
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವಕಾಶ ಸಿಕ್ಕರೂ ತಮಗೆ ಸಚಿವ ಸ್ಥಾನ ಬೇಡವೆಂದು ಹೇಳಿದ್ದು, ಜನಪರ ಆಡಳಿತಕ್ಕೆ ಒತ್ತು ನೀಡಿದ್ದಾರೆ. ತಾನು ಎರಡು ವರ್ಷ ಮಂತ್ರಿ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಮಾಡಿದ್ದು, ಈಗ ಬೇರೆಯವರಿಗೂ ಅವಕಾಶ ಕೊಡಲಿ ಎಂದವರು ಹೇಳಿದ್ದಾರೆ.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ವಜಾಗೊಳಿಸಿದೆ. ಈ ಹಿಂದೆ ಜಿಲ್ಲಾ ನ್ಯಾಯಾಲಯವೂ ವಜಾಗೊಳಿಸಿತ್ತು. ಪ್ರಕರಣದ ಗಾಂಭೀರ್ಯತೆ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಸಿಐಡಿ ತನಿಖೆ ತೀವ್ರಗೊಂಡಿದ್ದು, ನೇಹಾ ಕುಟುಂಬಕ್ಕೆ ಇದು ಕಾನೂನು ಹೋರಾಟದಲ್ಲಿ ಸಿಕ್ಕ ದೊಡ್ಡ ಗೆಲುವು.
ಬ್ಯಾಂಕುಗಳ ಮಿಸ್-ಸೆಲ್ಲಿಂಗ್ನಿಂದ ಹಿಡಿದು ಇಪಿಎಫ್ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು
Important Financial Rules change from July 2026: ಜನಸಾಮಾನ್ಯರ ಹಣಕಾಸು ಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಕ್ರಮಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಆಧಾರ್ಗೆ ಇಮೇಲ್ ಐಡಿ ಲಿಂಕ್ ಮಾಡಲು ಇದ್ದ ನಿಯಮದಲ್ಲಿ ಬದಲಾವಣೆ ಇದೆ. ಇಂಥ ಏಳೆಂಟು ಪ್ರಮುಖ ನಿಯಮ ಬದಲಾವಣೆ ಮತ್ತು ಕ್ರಮಗಳು ಜುಲೈನಿಂದ ಆರಂಭವಾಗುತ್ತವೆ.
ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಕರ್ನಾಟಕ ಸರ್ಕಾರವು ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಅಭಿರಾಮ್ ಜಿ. ಶಂಕರ್, ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರ ಜೊತೆಗೆ, ಪುರಸಭೆ ಆಡಳಿತ ನಿರ್ದೇಶಕರ ಕ್ಯಾಡರ್ ಹುದ್ದೆಗೆ ಸಮಾನವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಕೆಲವು ಹುದ್ದೆಗಳನ್ನು ಐಎಎಸ್ (ವೇತನ) ನಿಯಮಗಳು–2016ರ ನಿಯಮ 12ರ ಅಡಿಯಲ್ಲಿ ಸಮಾನ ಹುದ್ದೆಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.
ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!
ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಈಗ ಹೊಸದೊಂದು ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅ...
ರಾಜ್ಯ ಬಜೆಟ್ ಪ್ರಕಟ: ಗೃಹಲಕ್ಷ್ಮಿ ಯೋಜನೆ ಮುಂದುವರಿಕೆ, ಕೃಷಿ ವಲಯಕ್ಕೆ 40,000 ಕೋಟಿ ರೂ. ಘೋಷಣೆ!
ಮುಖ್ಯಮಂತ್ರಿಗಳು ಇಂದು ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub
ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.